Skip to main content

Posts

Showing posts from August, 2019

ಚಿರಋಣಿ

ಭಾಷ್ಪಕ್ಕೆ ಭಾವನೆಗಳ ಕೊಟ್ಟವರಾರು? ನೆನಪುಗಳೋ, ಜನರೋ, ಋತುಗಳೋ ಅಥವಾ, ನಡೆದು ಬಂದ ಹಾದಿಯೋ... ಮೈಲಿಗಲ್ಲಿನ ಮೇಲೆ ಹೆಸರು ಬರೆದಾಗಿದೆ ಇನ್ನು ಹಿಂದೆ ತಿರುಗಿ ನೋಡಿದರೆ ನಡೆದು ಬಂದ ಹಾದಿಯ ದೂರ ಮಾತ್ರ ಎದೆಗೆ ಸನಿಹ. ನೆನಪುಗಳಲ್ಲ, ಜನರಲ್ಲ, ಋತುಗಳಲ್ಲ... ಸಾಗುವ ದಾರಿಯಷ್ಟೇ ಭಾಷ್ಪಕ್ಕೆ ಭಾವನೆಗಳನು ತುಂಬುವುದು. ಇಂದಿಗೂ, ಎಂದೆಂದಿಗೂ; ಋಣಿಯಾಗಿರುವುದಷ್ಟೇ ನನ್ನ ಕರ್ತವ್ಯ.

ಚರಿತ್ರೆ

ಯುದ್ಧಭೂಮಿ ಅಲ್ಲದ ಜಾಗ ಹುಡುಕಿದರೂ ಸಿಗುವುದಿಲ್ಲ. ಗತವು ನೆನೆದಿದೆ- ರಕ್ತದಿಂದ, ಕಷ್ಟದ ಕಣ್ಣೀರಿನಿಂದ. ವಿಸ್ತರಿಸಿದ ರಾಜ್ಯವಲ್ಲ ಸೈನ್ಯದ ಸಂಖ್ಯೆಯಲ್ಲ ರಾಣಿಗೋಸ್ಕರ ಕಟ್ಟಿಸಿದ ಅರಮನೆಗಳಲ್ಲ, ಚರಿತ್ರೆಯ ದೊಡ್ಡತನ. ಕಪ್ಪು ಕೋಣೆಯಲ್ಲಿ ಬಿಗಿ ಉಸಿರು ಹಿಡಿದು ಭಯದಿಂದ ಬದುಕಿದ ಜನರೇ ಚರಿತ್ರೆಯ ದೊಡ್ಡತನ, ಜೀವಕ್ಕಾಗಿ ಹುಡುಕಿ ಬದುಕಿದ ಜನರೇ ಚರಿತ್ರೆಗೆ ದೊಡ್ಡತನ.

ದೇವಲೋಕದಲ್ಲಿ ಶರತ್ಕಾಲ

ತಾರೆಗಳು ಬೀಳುವ ಸಮಯ ಶರತ್ಕಾಲವಿರಬೇಕು ದೇವಲೋಕದಲ್ಲಿ ಬಿದ್ದವು ಸುಮ್ಮನಿರದೆ ಕಣ್ಣುಗಳಲ್ಲಿ  ಕೂತು ಮಿನುಗಬೇಕಂತೆ. ಅವುಗಳಿಗೆ ಕನ್ನಡಿ ಇಟ್ಟವರಾರೆಂದು ಹುಡುಕಬೇಕು, ನನ್ನ ಕಣ್ಣುಗಳ ಹೋಲಿಕೆ ಇನ್ನ್ಯಾರಿಗಿದೆಯೆಂದು ಇಟ್ಟವರನ್ನು ಕೇಳಲು.

All Night's Road

it's an all night's road and I'm not even counting the miles I don't seek stars to guide me anymore my screams inside Whisper a gospel or Two my worries as it Were yesterday are far too gone to carry anything from the shabby travelled path I hold nothing for the path yet to come It's a long night's road and I'm not even counting the miles.