ಭಾಷ್ಪಕ್ಕೆ ಭಾವನೆಗಳ ಕೊಟ್ಟವರಾರು?
ನೆನಪುಗಳೋ, ಜನರೋ, ಋತುಗಳೋ
ಅಥವಾ, ನಡೆದು ಬಂದ ಹಾದಿಯೋ...
ಮೈಲಿಗಲ್ಲಿನ ಮೇಲೆ ಹೆಸರು ಬರೆದಾಗಿದೆ
ಇನ್ನು ಹಿಂದೆ ತಿರುಗಿ ನೋಡಿದರೆ ನಡೆದು
ಬಂದ ಹಾದಿಯ ದೂರ ಮಾತ್ರ ಎದೆಗೆ ಸನಿಹ.
ನೆನಪುಗಳಲ್ಲ, ಜನರಲ್ಲ, ಋತುಗಳಲ್ಲ...
ಸಾಗುವ ದಾರಿಯಷ್ಟೇ ಭಾಷ್ಪಕ್ಕೆ
ಭಾವನೆಗಳನು ತುಂಬುವುದು.
ಇಂದಿಗೂ, ಎಂದೆಂದಿಗೂ;
ಋಣಿಯಾಗಿರುವುದಷ್ಟೇ ನನ್ನ ಕರ್ತವ್ಯ.
ನೆನಪುಗಳೋ, ಜನರೋ, ಋತುಗಳೋ
ಅಥವಾ, ನಡೆದು ಬಂದ ಹಾದಿಯೋ...
ಮೈಲಿಗಲ್ಲಿನ ಮೇಲೆ ಹೆಸರು ಬರೆದಾಗಿದೆ
ಇನ್ನು ಹಿಂದೆ ತಿರುಗಿ ನೋಡಿದರೆ ನಡೆದು
ಬಂದ ಹಾದಿಯ ದೂರ ಮಾತ್ರ ಎದೆಗೆ ಸನಿಹ.
ನೆನಪುಗಳಲ್ಲ, ಜನರಲ್ಲ, ಋತುಗಳಲ್ಲ...
ಸಾಗುವ ದಾರಿಯಷ್ಟೇ ಭಾಷ್ಪಕ್ಕೆ
ಭಾವನೆಗಳನು ತುಂಬುವುದು.
ಇಂದಿಗೂ, ಎಂದೆಂದಿಗೂ;
ಋಣಿಯಾಗಿರುವುದಷ್ಟೇ ನನ್ನ ಕರ್ತವ್ಯ.
Comments
Post a Comment